ಗೋವುಗಳಿಗೂ ಬರುತ್ತಿವೆ ಅಚ್ಚೇ ದಿನ್!
ಜಗತ್ತಿನಲ್ಲಿ ಗೋವನ್ನು ಪೂಜಿಸುವ ಏಕೈಕ ರಾಷ್ಟ್ರವೆಂದರೆ ಅದು ನಮ್ಮ ಭಾರತ ಮಾತ್ರ. ಅದರಲ್ಲೂ ಹಿಂದೂಗಳು ಗೋವನ್ನು ಅತ್ಯಂತ ಪೂಜ್ಯ ಭಾವದಿಂದ ಕಾಣುತ್ತಾರೆ. ಇವತ್ತಿಗೂ ನಾವು ಹಸುವನ್ನು 'ಗೋಮಾತೆ' ಎಂದೇ ಪೂಜಿಸುತ್ತೇವೆ. ಪುರಾಣ ಕಾಲದಿಂದಲೂ ಕೂಡ ಗೋವಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಪ್ರತಿಯೊಬ್ಬ ಹಿಂದೂ ಕೂಡ ಹಸುವನ್ನು 'ದೇವರು' 'ತಾಯಿ' ಎಂಬ ಇತ್ಯಾದಿ ರೂಪದಿಂದ ಕಾಣುತ್ತಾನೆ. ಮೂವತ್ತು ಕೋಟಿ ದೇವತೆಗಳು ಹಸುವಿನಲ್ಲೇ ನೆಲೆಸಿದ್ದಾರೆ ಎಂದು ನಾವು ನಂಬಿದ್ದೇವೆ. ಈ ದೇಶದ ಆದರ್ಶ ಪುರುಷರಾದ ಶ್ರೀರಾಮ ಹಾಗೂ ಶ್ರೀಕೃಷ್ಣ ಗೋವನ್ನು ಪ್ರೀತಿಸುತ್ತಿದ್ದ ವಿಷಯ ನಮಗೆಲ್ಲಾ ತಿಳಿದೇ ಇದೆ. ಅದರಲ್ಲೂ ಶ್ರೀಕೃಷ್ಣ ಗೋವನ್ನು ಹೆಚ್ಚು ಪ್ರೀತಿಸುತ್ತಿದ್ದ. ಅವನು ಎಲ್ಲಾ ಗೋವುಗಳೊಂದಿಗೆ ಸ್ನೇಹ ಭಾವದಿಂದಿದ್ದ. ಇವತ್ತಿಗೂ ನಾವು ಕೃಷ್ಣನನ್ನು ಪೂಜಿಸಿದರೆ ಸಾಕ್ಷಾತ್ 'ಗೋಮಾತೆ' ಯನ್ನೇ ಪೂಜಿಸಿದಂತೆ ಎಂದು ನಾವು ನಂಬಿದ್ದೇವೆ. ಆದರೆ ದುರದೃಷ್ಟವಶಾತ್ ಇಂದು ಗೋವನ್ನು ಪೂಜಿಸೋದಿರಲಿ ಅವುಗಳನ್ನು ಸಂರಕ್ಷಿಸುವುದೇ ದೊಡ್ಡ ಕೆಲಸವಾಗಿದೆ. ಹೌದು ಯಾವ ಭಾರತದಲ್ಲಿ ಗೋಪೂಜೆ ನಡೆಯುತ್ತಿತ್ತೋ ಅದೇ ಭಾರತದಲ್ಲಿ ಇಂದು ಅವುಗಳ 'ಮಾರಣಹೋಮ' ನಡೆಯುತ್ತಿದೆ. ಭಾರತದಲ್ಲಿ ಇಂದು ಗೋಶಾಲೆಗಳು ತೆರೆಯಲು ಬದಲು ಕಸಾಯಿಖಾನೆಗಳು ತೆರೆಯುತ್ತಿವೆ! ಲಕ್ಷಾಂತರ ಗೋವುಗಳನ್ನು ಮಾರಿ ಅವುಗಳನ್ನು ಕೊಂದು 'ಗ...