Posts

Showing posts from May, 2017

ಎಲ್ಲಿದ್ದಾನೆ ದೇವರು?

Image
ಯಾರು ಈ ದೇವರು ? ದೇವರು ಇದ್ದಾನ ? ಹಾಗಾದರೆ ಎಲ್ಲಿದ್ದಾನೆ ? ಈ ಪ್ರಶ್ನೆ ಮನುಷ್ಯನಿಗೆ ತನ್ನ ಜೀವನದಲ್ಲಿ ಬರಲೇಬೇಕು . ಪ್ರಶ್ನೆನೇ ತುಂಬಾ ಚೆನ್ನಾಗಿದೆ . ಆದರೆ ಇದರ ಉತ್ತರ ಮಾತ್ರ ಅತ್ಯಂತ ಸರಳ ! ದೇವರು ಅನ್ನೋದು ಒಂದು 'ಶಕ್ತಿ ' . ಹೇಗೆ ಒಂದು ಯಂತ್ರವನ್ನು ಚಲಾಯಿಸಲು ಒಬ್ಬ ಮಾಲಿಕನ ಅವಶ್ಯಕತೆ ಇದೆಯೋ ಹಾಗೇ ಈ ಪ್ರಪಂಚ ಎಂಬ 'ಮಾಯೆ' ಯ ಸೂತ್ರಧಾರನು ಇರಲೇಬೇಕು ಅಲ್ವಾ ? ನಾನು ಪ್ರಪಂಚವನ್ನು 'ಮಾಯೆ ' ಎಂದು ಕರೆದೆ ; ಯಾಕೆ ಗೊತ್ತಾ ? ವಾಸ್ತವವಾಗಿ ಈ 'ಪ್ರಪಂಚ ' ಅನ್ನೋದು ಇಲ್ವೇ ಇಲ್ಲ ! ಬದಲಾಗಿ ಇದು ನಮ್ಮ ಭ್ರಮೆ . ನಾವಿಲ್ಲಿ ಪದಪ್ರಯೋಗವನ್ನು ತಪ್ಪಾಗಿ ಮಾಡುತ್ತಿದ್ದೇವೆ ಅಷ್ಟೇ . ಪ್ರಪಂಚದ ಬದಲಾಗಿ ನಾವು 'ದೇವರು' ಎಂದು ಹೇಳಬೇಕಿತ್ತು. ಎಲ್ಲೆಲ್ಲೂ ದೇವರೇ ಆವೃತನಾಗಿರುವಾಗ ಈ ಜಗತ್ತಿಗೆ ಜಾಗ ಎಲ್ಲಿ ಸಿಗಬೇಕು ? ಆದ್ದರಿಂದ ಜಗತ್ತು ಅನ್ನೋದು ಒಂದು ಮಾಯೆ ಅಷ್ಟೇ . ಈ ಪ್ರಶ್ನೆ ನರೇಂದ್ರನಿಗೂ ಕೂಡ ಬಾಲ್ಯದಲ್ಲಿಯೇ ಬಂದಿತ್ತು . "ನೀವು ದೇವರನ್ನು ನೋಡಿದ್ದೀರ ?" ಎಂದು ಅನೇಕರಿಗೆ ಕೇಳಿದನು . ಆದರೆ ಯಾರಿಂದಲೂ ಸೂಕ್ತ ಉತ್ತರ ಸಿಗಲಿಲ್ಲ . ಕೊನೆಗೆ ನರೇಂದ್ರನಿಗೆ ಅನಿಸಿತು "ಈ ಎಲ್ಲಾ ಜನರದ್ದು ಕೇವಲ ಬುಟಾಟಿಕೆ ಅಷ್ಟೇ ! ಪ್ರತಿಯೊಬ್ಬರೂ ದೇವರ ಪೂಜೆ ಮಾಡುತ್ತಾರೆ ಆದರೆ ಒಬ್ಬರೂ ಕೂಡ ದೇವರನ್ನು ನೋಡಿಲ್ಲ! ಏನಿದು ವಿಚಿತ್ರ ! "    ಕೊನೆಗೆ ನರೇಂದ್

ಭಾರತಕ್ಕೆ ನಿವೇದಿತಾಳ ಕೊಡುಗೆ ಅಪಾರ! (ಭಾಗ - 2)

Image
ಸರಿ; ನಿವೇದಿತಾ ಭಾರತಕ್ಕೆ ಬಂದಳು. ಆದರೆ ಅವಳಿಗೆ ಇಲ್ಲಿಗೆ ಬಂದ ಮೇಲೆ ಭಾರತದ ಪರಿಸ್ಥಿತಿ ಹೇಗಿತ್ತು ಅಂತ ಅರಿವಿಗೆ ಬಂತು. ಭಾರತದಲ್ಲಿ ಮೂಢನಂಬಿಕೆಗಳು ತಾಂಡವಾಡುತ್ತಿತ್ತು. ಭಾರತದಲ್ಲಿ ನಾ ಮೇಲು ನೀ ಕೀಳು ಎಂಬ  ಜಾತಿಯ ಪದ್ದತಿ ಇತ್ತು. ಇದನ್ನೆಲ್ಲಾ ನೋಡಿದ ನಿವೇದಿತಾಳೇ ಒಮ್ಮೆ ದಿಗ್ಬ್ರಾಂತಳಾದಳು! ಸ್ವಾಮೀಜಿಗೆ ನಿವೇದಿತಾಳ ಮೇಲೆ ಅಪಾರ ನಂಬಿಕೆಯನ್ನು. ನನ್ನ ನಂತರ ನಿವೇದಿತಾ ನನ್ನ ಕೆಲಸವನ್ನು ಮಂದುವರಿಸುವಳು ಎಂದು ಅವರಿಗೆ ತಿಳಿದಿತ್ತು. ಸ್ವಾಮೀಜಿಯ ಆಸೆಯಂತೆ ನಿವೇದಿತಾ ಹೆಣ್ಣು ಮಕ್ಕಳಿಗೆ ಶಾಲೆಯೊಂದನ್ನು ಪ್ರಾರಂಭಿಸಿದಳು. ಆದರೆ ಆಗ ಹೆಣ್ಣು ಮಕ್ಕಳನ್ನು ಶಾಲೆಗೆ ಯಾರು ಕಳಿಸುತ್ತಿದ್ದರು? ಕೊನೆಗೆ ನಿವೇದಿತಾ ಮನೆ-ಮನೆಗೆ ಹೋಗಿ "ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿಕೊಡಿ"  ಎಂದು ಬೇಡಿಕೊಂಡಳು! ಕೊನೆಗೆ ಬಾಲ ವಿಧವೆಯರಿಗೂ ಪಾಠ ಹೇಳಿದಳು! ಅವರಿಗೆ ಗಣಿತ, ಕಲೆ, ಹೊಲಿಗೆಯ ತರಬೇತಿ ನೀಡಿದಳು. ಒಂದು ನಿವೇದಿತಾ ಮಕ್ಕಳಿಗೆ "ಮಕ್ಕಳೇ ಭಾರತದ ರಾಣಿ ಯಾರು?" ಎಂದು ಕೇಳಿದಳು. ಆಗ ಒಂದು ಮಗು "ಕ್ವೀನ್ ಎಲಿಜಬೆತ್" ಎಂದು ಗಟ್ಟಿಯಾಗಿ ಉತ್ತರಿಸಿದಳು. ಅಷ್ಟಕ್ಕೇ ನಿವೇದಿತಾ ಕೋಪಗೊಂಡು "ಏನು? ಕ್ವೀನ್ ಎಲಿಜಬೆತ್ ಇಂಗ್ಲೆಂಡಿನ ರಾಣಿ! ಭಾರತದ ರಾಣಿ 'ಸೀತೆ'! ಭಾರತದ ರಾಣಿ  ' ಸಾವಿತ್ರಿ ' ಎಂದು ಹೇಳಿದಳು!! ನಿಜಕ್ಕೂ ಈಕೆಯ ಭಾರತ ಪ್ರೇಮವು ಅದ್ಭುತ! ಸ್ವಾಮೀಜಿ ಮಾರ್ಚ್ 25ರ

ಭಾರತಕ್ಕೆ ನಿವೇದಿತಾಳ ಕೊಡುಗೆ ಅಪಾರ! (ಭಾಗ - 1)

Image
'ನಿವೇದಿತಾ' ಈ ಹೆಸರು ಭಾರತೀಯರಿಗೆ ಅಪರಿಚಿತ ಎಂದು ಹೇಳಿದರೂ ತಪ್ಪಾಗಲಾರದು! ಯಾಕೆಂದ್ರೆ ಈ ದೇಶದ ಶೇಕಡ 85ರಷ್ಟು ಜನರಿಗೆ ನಿವೇದಿತಾ ಎಂದಾಕ್ಷಣ ಒಮ್ಮೆ ತಬ್ಬಿಬ್ಬರಾಗುತ್ತಾರೆ! ಇದೇ ಈ ದೇಶದ ದುರ್ದೈವ.. ಆದರೆ 'ನನ್ನ ಭಾರತ' ಬಿಟ್ಟರೆ ಬೇರೆ ಯಾವುದೇ ಪದವನ್ನೂ ಬಳಸದ ಈ ಪುಣ್ಯಾತ್ಗಿತ್ತಿನ ನಾವು ಇಂದು ಮರೆತಿದ್ದೀವಲ್ಲ? ಸ್ನೇಹಿತರೇ ಬಹುಶಃ ನಿವೇದಿತಾ ಭಾರತವನ್ನ ತಿಳಿದುಕೊಂಡಷ್ಟು ಇಂದು ನಮಗೆ ನಿಮಗೆ ಭಾರತದ ಬಗ್ಗೆ ಏನೂ ತಿಳಿದಿಲ್ಲ! ಆಕೆ ಭಾರತೀಯಳಲ್ಲ; ಆಕೆಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿದಿರಲಿಲ್ಲ; ಆಕೆಯ ವೇಷಭೂಷಣ ನಮ್ಮಂತೆ ಇರಲಿಲ್ಲ. ಆಕೆಗೆ ನಮ್ಮ ಭಾಷೆ ಗೊತ್ತಿರಲಿಲ್ಲ. ಇಷ್ಟಾದರೂ ತನ್ನ ಜೀವವನ್ನೇ ಭಾರತಕ್ಕೇ ಸಮರ್ಪಿಸಿದಳು! ಹೌದು 'ಮಾರ್ಗರೇಟ್ ಎಲಿಜಬೆತ್ ನೋಬೆಲ್' ಸ್ವಾಮಿ ವಿವೇಕಾನಂದರ ಪ್ರೀತಿಯ ಶಿಷ್ಯೆ. ಹುಟ್ಟಿದ್ದು ದೂರದ ಐರ್ಲೆಂಡಿನಲ್ಲಿ. ಬಾಲ್ಯದಿಂದಲೂ ಚರ್ಚಿಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದಳು. ಕ್ರೈಸ್ತ ಧರ್ಮದ ಬಗ್ಗೆ ಅನೇಕ ಪ್ರಶ್ನೆಗಳು ಇವಳಲ್ಲಿ ಹುಟ್ಟಿಕೊಂಡವು. ಆದರೆ ಇವಳ ಪ್ರಶ್ನೆಗಳಿಗೆ ಯಾರೂ ಉತ್ತರ ನೀಡುತ್ತಿರಲಿಲ್ಲ. ಆದ್ದರಿಂದ ತನ್ನ ಪ್ರಶ್ನೆಗಳಿಗೆ ಸಮರ್ಥವಾ ದ ಉತ್ತರವನ್ನು ನೀಡುವ ಒಬ್ಬ ಗುರುವನ್ನು ಹುಡುಕುತ್ತಿದ್ದಳು. ಸ್ವಾಮಿ ವಿವೇಕಾನಂದರು ಆಗ ತಾನೆ 'ವಿಶ್ವವಿಜೇತ'ರಾಗಿ ಇಂಗ್ಲೆಂಡಿಗೆ ತಮ್ಮ ಉಪನ್ಯಾಸಗಳನ್ನು  ನೀಡಲು ಬಂದಿದ್ದರು. ಒಮ್ಮೆ ಸ್ವಾಮೀಜಿ