ಭಾರತಕ್ಕೆ ನಿವೇದಿತಾಳ ಕೊಡುಗೆ ಅಪಾರ! (ಭಾಗ - 1)
'ನಿವೇದಿತಾ' ಈ ಹೆಸರು ಭಾರತೀಯರಿಗೆ ಅಪರಿಚಿತ ಎಂದು ಹೇಳಿದರೂ ತಪ್ಪಾಗಲಾರದು! ಯಾಕೆಂದ್ರೆ ಈ ದೇಶದ ಶೇಕಡ 85ರಷ್ಟು ಜನರಿಗೆ ನಿವೇದಿತಾ ಎಂದಾಕ್ಷಣ ಒಮ್ಮೆ ತಬ್ಬಿಬ್ಬರಾಗುತ್ತಾರೆ! ಇದೇ ಈ ದೇಶದ ದುರ್ದೈವ..
ಆದರೆ 'ನನ್ನ ಭಾರತ' ಬಿಟ್ಟರೆ ಬೇರೆ ಯಾವುದೇ ಪದವನ್ನೂ ಬಳಸದ ಈ ಪುಣ್ಯಾತ್ಗಿತ್ತಿನ ನಾವು ಇಂದು ಮರೆತಿದ್ದೀವಲ್ಲ?
ಸ್ನೇಹಿತರೇ ಬಹುಶಃ ನಿವೇದಿತಾ ಭಾರತವನ್ನ ತಿಳಿದುಕೊಂಡಷ್ಟು ಇಂದು ನಮಗೆ ನಿಮಗೆ ಭಾರತದ ಬಗ್ಗೆ ಏನೂ ತಿಳಿದಿಲ್ಲ! ಆಕೆ ಭಾರತೀಯಳಲ್ಲ; ಆಕೆಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿದಿರಲಿಲ್ಲ; ಆಕೆಯ ವೇಷಭೂಷಣ ನಮ್ಮಂತೆ ಇರಲಿಲ್ಲ. ಆಕೆಗೆ ನಮ್ಮ ಭಾಷೆ ಗೊತ್ತಿರಲಿಲ್ಲ. ಇಷ್ಟಾದರೂ ತನ್ನ ಜೀವವನ್ನೇ ಭಾರತಕ್ಕೇ ಸಮರ್ಪಿಸಿದಳು!
ಹೌದು 'ಮಾರ್ಗರೇಟ್ ಎಲಿಜಬೆತ್ ನೋಬೆಲ್' ಸ್ವಾಮಿ ವಿವೇಕಾನಂದರ ಪ್ರೀತಿಯ ಶಿಷ್ಯೆ. ಹುಟ್ಟಿದ್ದು ದೂರದ ಐರ್ಲೆಂಡಿನಲ್ಲಿ. ಬಾಲ್ಯದಿಂದಲೂ ಚರ್ಚಿಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದಳು. ಕ್ರೈಸ್ತ ಧರ್ಮದ ಬಗ್ಗೆ ಅನೇಕ ಪ್ರಶ್ನೆಗಳು ಇವಳಲ್ಲಿ ಹುಟ್ಟಿಕೊಂಡವು. ಆದರೆ ಇವಳ ಪ್ರಶ್ನೆಗಳಿಗೆ ಯಾರೂ ಉತ್ತರ ನೀಡುತ್ತಿರಲಿಲ್ಲ. ಆದ್ದರಿಂದ ತನ್ನ ಪ್ರಶ್ನೆಗಳಿಗೆ ಸಮರ್ಥವಾ ದ ಉತ್ತರವನ್ನು ನೀಡುವ ಒಬ್ಬ ಗುರುವನ್ನು ಹುಡುಕುತ್ತಿದ್ದಳು. ಸ್ವಾಮಿ ವಿವೇಕಾನಂದರು ಆಗ ತಾನೆ 'ವಿಶ್ವವಿಜೇತ'ರಾಗಿ ಇಂಗ್ಲೆಂಡಿಗೆ ತಮ್ಮ ಉಪನ್ಯಾಸಗಳನ್ನು ನೀಡಲು ಬಂದಿದ್ದರು. ಒಮ್ಮೆ ಸ್ವಾಮೀಜಿ ಮಾರ್ಗರೇಟ್ ಳ ಸ್ನೇಹಿತಳ ಮನೆಗೆ ಬಂದಿದ್ದರು. ಆಗ ಅವಳ ಸ್ನೇಹಿತೆ "ನೋಡು ಮಾರ್ಗರೇಟ್ ನಿನ್ನ ಎಲ್ಲಾ ಪ್ರಶ್ನೆಗಳಿಗೆ ಈ ಸಂನ್ಯಾಸಿಯು ಉತ್ತರಿಸುತ್ತಾರೆ" ಎಂದು ಹೇಳಿದಳು. ಸ್ವಾಮೀಜಿ ಉಪನ್ಯಾಸ ನೀಡುವಾಗ 'ರಾಜಯೋಗ'ದ ಕೆಲವು ರಹಸ್ಯಗಳನ್ನು ಹೇಳಿದರು. ಆಗ ಮಾರ್ಗರೇಟ್ ಗೆ ಈ ಸಂನ್ಯಾಸಿಯು ಸಾಮಾನ್ಯನಲ್ಲ ಎಂದು ಅರಿವಾಯಿತು. ಅಂದಿನಿಂದ ಮಾರ್ಗರೇಟ್ ಸ್ವಾಮೀಜಿಯ ಎಲ್ಲಾ ಉಪನ್ಯಾಸಗಳಿಗೂ ಹೋಗುತ್ತಿದ್ದಳು. ಮುಂದೆ ತನ್ನ
'The Master As I Saw Him' ಎಂಬ ಪುಸ್ತಕದಲ್ಲಿ ಬರೆಯುತ್ತಾಳೆ "ಸ್ವಾಮೀಜಿ ಅಂದು ಮಾಡಿದ ಉಪನ್ಯಾಸದಲ್ಲಿ ಅವರ ಮೊದಲನೆಯ ಮಾತು ನಿಜ. ಎರಡನೆಯ ಮಾತೂ ನಿಜ. ಮೂರನೆಯ ಮಾತೂ ನಿಜ!
Alas! He did not speak a single lie in his whole life! ಅಂದಿನಿಂದ ಮಾರ್ಗರೇಟ್ ಸ್ವಾಮೀಜಿಗೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಳು. ಆಶ್ಚರ್ಯ! ಸ್ವಾಮೀಜಿ ಇಡೀ ಕ್ರೈಸ್ತ ಧರ್ಮವನ್ನೇ ಅವಳಿಗೆ ಬೋಧಿಸಿದರು! ನಿವೇದಿತಾ ಮುಂದೆ ಹೇಳುತ್ತಾಳೆ "ಸ್ವಾಮೀಜಿಯ ಉತ್ತರಗಳನ್ನು ಕೇಳಿ ನಾನು ಅವರನ್ನು ನನ್ನ ಗುರು ವೆಂದು ಸ್ವೀಕರಿಸಲೇಬೇಕಾಯಿತು!" ಸ್ವಾಮೀಜಿ ಮುಂದೆ ಹೇಳುತ್ತಾರೆ "ಮಾರ್ಗರೇಟ್ ಎಷ್ಟು ಸುಂದರವಾಗಿದ್ದಳೆಂದರೆ ಸಾಕ್ಷಾತ್ 'ಸರಸ್ವತಿ'ಯೇ ಪಾಶ್ಚಾತ್ಯರ ಉಡುಗೆಯನ್ನು ಧರಿಸಿ ಬಂದಂತ್ತಿತ್ತು!" ಸ್ವಾಮೀಜಿ ಭಾರತಕ್ಕೆ ಬಂದರು. ಇಲ್ಲಿನ ಬಡವರಿಗೆ ಅವರು ಸೇವೆ ಮಾಡಿದರು. ಮಿಸಸ್ ಬುಲ್ ಗೆ ಬರೆದ ಪತ್ರದಲ್ಲಿ ಸ್ವಾಮೀಜಿ ಹೇಳುತ್ತಾರೆ "ನನಗೆ ಈ ಬಡವರ ಸೇವೆಯಲ್ಲಿ ಎಷ್ಟು ಆನಂದ ಅನುಭವಿಸುತ್ತಿದ್ದೇನೆ ನಿಮಗೆ ಗೊತ್ತಾ?". ಈ ಪತ್ರವನ್ನು ಓದಿದ ನಿವೇದಿತಾ ನಾನು ಭಾರತಕ್ಕೆ ಬರುತ್ತೇನೆಂದು ಹಠ ಹಿಡಿದಳು. ಆದರೆ ಸ್ವಾಮೀಜಿ "ನಿನ್ನ ಕೈಯಲ್ಲಿ ಆಗುವ ಕೆಲಸವಲ್ಲ ಇದು. ನೀನು ಅಲ್ಲೇ ಇರು!" ಎಂದು ಹೇಳಿದರು. ಆಸೆ ಹುಟ್ಟಿಸಿದ್ದೂ ಇವರೇ; ಈಗ ಬರಬೇಡ ಎಂದು ಹೇಳುತ್ತಿರುವವರು ಇವರೇ! ಸರಿಯಾದ ದಿನ ನೋಡಿಕೊಂಡು ಸ್ವಾಮೀಜಿ " ಮಾರ್ಗರೇಟ್ ನೀನು ಭಾರತಕ್ಕೆ ಬರಬಹುದು. ಆದರೆ ಒಂದು ಶರತ್ತು. ನೀನು ನನ್ನ ಭಾರತೀಯರ ಬಗ್ಗೆ ಕೆಟ್ಟದಾಗಿ ಒಂದು ಮಾತನ್ನೂ ಆಡಬಾರದು." ಎಂದು ಪತ್ರ ಬರೆದರು. ಇದಕ್ಕೆ ಒಪ್ಪಿ ನಿವೇದಿತಾ ಭಾರತಕ್ಕೆ ಬಂದಳು.
ಗುರು- ಶಿಷ್ಯೆ!
ಮುಂದೇನಾಯ್ತು?
ಕಾಯ್ತಾ ಇರಿ!!
Comments
Post a Comment