ಭಾರತಕ್ಕೆ ನಿವೇದಿತಾಳ ಕೊಡುಗೆ ಅಪಾರ! (ಭಾಗ - 2)
ಸರಿ; ನಿವೇದಿತಾ ಭಾರತಕ್ಕೆ ಬಂದಳು. ಆದರೆ ಅವಳಿಗೆ ಇಲ್ಲಿಗೆ ಬಂದ ಮೇಲೆ ಭಾರತದ ಪರಿಸ್ಥಿತಿ ಹೇಗಿತ್ತು ಅಂತ ಅರಿವಿಗೆ ಬಂತು. ಭಾರತದಲ್ಲಿ ಮೂಢನಂಬಿಕೆಗಳು ತಾಂಡವಾಡುತ್ತಿತ್ತು. ಭಾರತದಲ್ಲಿ ನಾ ಮೇಲು ನೀ ಕೀಳು ಎಂಬ ಜಾತಿಯ ಪದ್ದತಿ ಇತ್ತು. ಇದನ್ನೆಲ್ಲಾ ನೋಡಿದ ನಿವೇದಿತಾಳೇ ಒಮ್ಮೆ ದಿಗ್ಬ್ರಾಂತಳಾದಳು! ಸ್ವಾಮೀಜಿಗೆ ನಿವೇದಿತಾಳ ಮೇಲೆ ಅಪಾರ ನಂಬಿಕೆಯನ್ನು. ನನ್ನ ನಂತರ ನಿವೇದಿತಾ ನನ್ನ ಕೆಲಸವನ್ನು ಮಂದುವರಿಸುವಳು ಎಂದು ಅವರಿಗೆ ತಿಳಿದಿತ್ತು. ಸ್ವಾಮೀಜಿಯ ಆಸೆಯಂತೆ ನಿವೇದಿತಾ ಹೆಣ್ಣು ಮಕ್ಕಳಿಗೆ ಶಾಲೆಯೊಂದನ್ನು ಪ್ರಾರಂಭಿಸಿದಳು. ಆದರೆ ಆಗ ಹೆಣ್ಣು ಮಕ್ಕಳನ್ನು ಶಾಲೆಗೆ ಯಾರು ಕಳಿಸುತ್ತಿದ್ದರು? ಕೊನೆಗೆ ನಿವೇದಿತಾ ಮನೆ-ಮನೆಗೆ ಹೋಗಿ "ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿಕೊಡಿ" ಎಂದು ಬೇಡಿಕೊಂಡಳು! ಕೊನೆಗೆ ಬಾಲ ವಿಧವೆಯರಿಗೂ ಪಾಠ ಹೇಳಿದಳು! ಅವರಿಗೆ ಗಣಿತ, ಕಲೆ, ಹೊಲಿಗೆಯ ತರಬೇತಿ ನೀಡಿದಳು. ಒಂದು ನಿವೇದಿತಾ ಮಕ್ಕಳಿಗೆ "ಮಕ್ಕಳೇ ಭಾರತದ ರಾಣಿ ಯಾರು?" ಎಂದು ಕೇಳಿದಳು. ಆಗ ಒಂದು ಮಗು "ಕ್ವೀನ್ ಎಲಿಜಬೆತ್" ಎಂದು ಗಟ್ಟಿಯಾಗಿ ಉತ್ತರಿಸಿದಳು. ಅಷ್ಟಕ್ಕೇ ನಿವೇದಿತಾ ಕೋಪಗೊಂಡು "ಏನು? ಕ್ವೀನ್ ಎಲಿಜಬೆತ್ ಇಂಗ್ಲೆಂಡಿನ ರಾಣಿ! ಭಾರತದ ರಾಣಿ 'ಸೀತೆ'! ಭಾರತದ ರಾಣಿ ' ಸಾವಿತ್ರಿ '
ಎಂದು ಹೇಳಿದಳು!! ನಿಜಕ್ಕೂ ಈಕೆಯ ಭಾರತ ಪ್ರೇಮವು ಅದ್ಭುತ! ಸ್ವಾಮೀಜಿ ಮಾರ್ಚ್ 25ರಂದು ಇವಳಿಗೆ ' ದೀಕ್ಷೆ '
ಯನ್ನು ನೀಡಿದರು. ಅವಳಿಗೆ ' ನಿವೇದಿತಾ ' ಎಂದು ಹೆಸರನ್ನು ಕೊಟ್ಟರು. ನಿವೇದಿತಾ ಎಂದರೇನು ಗೊತ್ತೇ?
ನಿವೇದಿತಾ ಎಂದರೆ ' ಸಮರ್ಪಿಸಿಕೊಳ್ಳುವುದು' ಎಂದರ್ಥ. ನಿವೇದಿತಾ ತನ್ನ ಕೊನೆಯ ಉಸಿರಿನವರೆಗೂ ತನ್ನನ್ನು ತಾನೇ ಭಾರತಕ್ಕೆ ಸಮರ್ಪಿಸಿಕೊಂಡಳು! ಒಮ್ಮೆ ನಿವೇದಿತಾ ರಸ್ತೆಯಲ್ಲಿ ಹೋಗುತ್ತಿದ್ದಾಗ ಒಂದು ತಾಯಿಯ ಆರ್ತನಾದವನ್ನು ಕೇಳಿದಳು. ನೋಡಿದರೆ ಆ ತಾಯಿಯ ಮಗು ಪ್ರಾಣ ಬಿಟ್ಟಿದೆ. ನಿವೇದಿತಾ ಏನಂದಳು ಗೊತ್ತೇ? "ಅಮ್ಮ, ಅಳಬೇಡಿ; ನಿಮ್ಮ ಮಗು ಆ ಜಗನ್ಮಾತೆಯ ಮಡಿಲು ಸೇರಿದೆ. ದೊಡ್ಡ ತಾಯಿಯ ಬಳಿ ಹೋಗಿದೆ ಅಷ್ಟೇ!" ಎಂದು ಹೇಳಿದಳು! ಬಹುಶಃ ನಾವು ನೀವು ಅಲ್ಲಿದ್ದರೆ ಈ ರೀತಿಯ ಸಾಂತ್ವನ ನೀಡಲು ಆಗುತ್ತಿತ್ತೋ ಏನೋ? ಇನ್ನೊಮ್ಮೆ ಒಂದು ಮಗು ಆಕೆಯ ಮಡಿಲಿನಲ್ಲೇ
'ಅಮ್ಮ ಅಮ್ಮ ಅಮ್ಮ ' ಎಂದು ಕೂಗಿ ಪ್ರಾಣ ಬಿಟ್ಟಿತು. ಆಕೆ ಹೇಳುತ್ತಾಳೆ "ನನ್ನ ಸ್ವಂತ ಮಗು ಪ್ರಾಣ ಬಿಟ್ಟಿದಷ್ಟೇ ನನಗೆ ದುಃಖವಾಯಿತು" ಎಂದು! ನಿಜವಾಗಿಯೂ ಆಕೆಯ ಮಾತೃ ಪ್ರೇಮ ಅಗಾಧವಾದದ್ದು! ಒಮ್ಮೆ ಸ್ವಾಮೀಜಿ ನಿವೇದಿತಾಳನ್ನು ಕರೆದು "ನಿವೇದಿತಾ! ನಿನ್ನನ್ನು ಭಾರತೀಯರು ಎಷ್ಟರ ಮಟ್ಟಿಗೆ ಒಪ್ಪಿಕೊಂಡಿದ್ದಾರೆ ಎಂದು ನಾನು ತಿಳಿಯಬೇಕು. ಹಾಗಾಗಿ ನೀನು ಶಾರದಾ ದೇವಿಯವರನ್ನು ಭೇಟಿ ಮಾಡು. ಅವರು ನಿನ್ನನ್ನು ಒಪ್ಪಿಕೊಂಡರೆ ಇಡೀ ಭಾರತವೇ ನಿನ್ನನ ಒಪ್ಪಿಕೊಂಡಂತೆ ! ನಿಜಕ್ಕೂ ಇದು ನಿವೇದಿತಾ ಹಾಗೂ ಸ್ವತಃ ವಿವೇಕಾನಂದರಿಗೆ ಅಗ್ನಿ ಪರೀಕ್ಷೆಯಾಗಿತ್ತು! ಒಂದು ವೇಳೆ ಶಾರದಾ ದೇವಿಯವರು ಇವಳನ್ನು ಒಪ್ಪದಿದ್ದರೆ ಇವಳನ್ನು ಬೇರೆ ದಾರಿಯಿಲ್ಲದೇ ಐರ್ಲೆಂಡಿಗೆ ಕಲಿಸುವುದು ಸೂಕ್ತ ಎಂದು ಸ್ವಾಮೀಜಿ ನಿಶ್ಚಯಿಸಿದ್ದರು! ಆದರೆ ಅಲ್ಲಿ ಆಗಿದ್ದೇ ಬೇರೆ! !
ಶಾರದಾ ದೇವಿಯವರು ನಿವೇದಿತಾಳನ್ನು ತಮ್ಮ ಮಂಚದ ಮೇಲೆ ಕೂರಿಸಿಕೊಂಡು ಅವಳ ತಲೆ ನೇವೇರುತ್ತ "ಮಗು ಹೆದರಬೇಡ ನಿನ್ನ ಜೊತೆ ಯಾರಿಲ್ಲಾ ಅಂದ್ರೂನೂ ಪರ್ವಾಗಿಲ್ಲ ನಿನ್ನ ಜೊತೆ ನಾನಿದ್ದೇನೆ! ಎಂದು ಹೇಳಿಬಿಟ್ಟರು!
ಇದನ್ನು ಕೇಳಿದ ಸ್ವಾಮೀಜಿ ಕುಣಿದಾಡಿಯೇಬಿಟ್ಟರು! ಕಲ್ಕತ್ತಾಗೆ 'ಪ್ಲೇಗ್' ರೋಗ ಹರಡಿದಾಗ ಈ ಪುಣ್ಯಾತ್ಗಿತ್ತಿ ಕೈಯಲ್ಲಿ ಪೊರಕೆ ತೆಗೆದುಕೊಂಡು ಮನೆ-ಮನೆಗೆ ಹೋಗಿ ಅಲ್ಲಿನ ಕೊಳಕಾದ ಜಾಗವನ್ನು ಸ್ವಚ್ಛಗೊಳಿಸಿದಳು! ಗೋಡೆಗಳಿಗೆ ಸುಣ್ಣ ಬಳಿದಳು ! ಮನೆ ಸ್ವಚ್ಛವಾಗಿದ್ದರೆ ರೋಗಗಳು ಹರಡುವುದಿಲ್ಲ ಎಂದು ಆಕೆಗೆ ಚೆನ್ನಾಗಿ ತಿಳಿದಿತ್ತು. ಆದರೆ ಭಗವಂತ ಅವಳ ಗುರುದೇವನನ್ನು ಕಸಿದುಕೊಂಡ! ಹೌದು ಅದೊಂದು ಸಂಜೆ ಅವಳಿಗೆ ಸುದ್ದಿ ಬಂತು "ವಿವೇಕಾನಂದರು 'ದೇಹತ್ಯಾಗ' ಮಾಡಿಬಿಟ್ಟಿದ್ದಾರೆ!!" ಅಂತ. ಅವಳು ದಿನಪೂರ್ತಿ ಅತ್ತಳು.
ಭಾರತದ ಮೂವತ್ತು ಕೋಟಿ ಜನರಲ್ಲಿ ಆಕೆಗೆ ಗೊತ್ತಿದ್ದು ಏಕೈಕ ವ್ಯಕ್ತಿ ಅದೇ 'ಸ್ವಾಮಿ ವಿವೇಕಾನಂದ'. ಈಗ ಅವರೇ ಇಲ್ಲವೆಂದರೆ ಆಕೆಗೆ ಎಷ್ಟು ದುಃಖವಾಗಿರಬಹುದು ಅಂತ ಒಮ್ಮೆ ಆಲೋಚನೆ ಮಾಡಿ ನೋಡಿ! ಆದರೂ ಅವಳು ಧೃತಿಗೆಡದೆ 'ನನ್ನ ಭಾರತ ' ವೆನ್ನುತ್ತ ಭಾರತೀಯರ ಸೇವೆಯಲ್ಲಿ ನಿರತಳಾದಳು. ನಿಮಗೆಲ್ಲಾ 'ಸುಬ್ರಹ್ಮಣ್ಯ ಭಾರತಿ' ಗೊತ್ತಿರಬಹುದು. ಆತ ಈ ದೇಶದ ಶ್ರೇಷ್ಠ ಕ್ರಾಂತಿಕಾರಿ. ಒಮ್ಮೆ ಅವರು ಕಾಂಗ್ರೆಸ್ ಅಧಿವೇಶನದಲ್ಲಿದ್ದಾಗ ನಿವೇದಿತಾ ಅವರನ್ನು ಭೇಟಿ ಮಾಡಿದಳು. ನಿವೇದಿತಾ ಕೇಳಿದಳು "ನಿಮಗೆ ಮದುವೆ ಆಗಿದೆಯೆ? ಎಂದು. " ಹೌದು" ಎಂದು ಸುಬ್ರಹ್ಮಣ್ಯ ಆಶ್ಚರ್ಯಗೊಂಡು ಹೇಳಿದರು. "ಹಾಗಾದರೆ ಎಲ್ಲಿ ನಿಮ್ಮ ಹೆಂಡತಿ? ಎಂದು ಕೇಳಿದಳು! ! ಅದಕ್ಕೆ ಅವರು " ನಮ್ಮ ಕಡೆ ಹೆಂಗಸರನ್ನು ಎಲ್ಲಾ ಕಡೆ ಕರ್ಕೊಂಡು ಹೋಗೋ ರೂಢಿ ಇಲ್ಲ! ಎಂದು ಹೇಳಿದರು . ನಿವೇದಿತಾ ಕೋಪಗೊಂಡು "ಏನು? ನಾಚಿಕೆ ಆಗಬೇಕು ನಿಮಗೆ! ಹೆಣ್ಣು ಮಕ್ಕಳು ಅಂದರೆ ಸುಮ್ಮನೆ ಮನೇಲಿ ಕೂತು ಕೆಲಸ ಮಾಡಬೇಕು ಅಂತ ನಂಬಿರುವ ನಿಮಗೆ ಬುದ್ಧಿ ಇಲ್ಲಾ? ಹೆಣ್ಣು ಮಕ್ಕಳೆಂದರೆ ಸಮಾಜದ ಕೆಲಸದಲ್ಲಿ ನಿರತರಾಗಬೇಕು.
ನಿಮ್ಮ ಬಲಗೈ ಹೇಗೋ ಹಾಗೆ ನಿಮ್ಮ ಹೆಂಡತಿ ಕೂಡ! ನಿಮ್ಮ ಬಲಗೈಯನ್ನು ಮನೇಲಿ ಬಿಟ್ಟು ಬಂದಿದ್ದೀರ? " ಎಂದು ಗುಡುಗಿದಳು ! ಸುಬ್ರಹ್ಮಣ್ಯ ಭಾರತಿಯವರು ಸಿಡಿಲು ಬಡಿದಂತೆ ನಿಂತಿದ್ದರು! ಅಂದಿನಿಂದ ಅವರು ತಮ್ಮ ಎಲ್ಲಾ ಕೆಲಸಗಳಿಗೆ ತಮ್ಮ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದರಂತೆ ! ಹೆಣ್ಣು ಮಕ್ಕಳನ್ನು ಮುಂಚೂಣಿಯಲ್ಲಿ ನಿಲ್ಲಿಸಿದಳು ಈ ಪುಣ್ಯಾತ್ಗಿತ್ತಿ! ! ಇಷ್ಟೆಲ್ಲಾ ಕೆಲಸ ಮಾಡಿದ ಮೇಲೆ ನಿವೇದಿತಾ ವಿಶ್ರಾಂತಿಗಾಗಿ 'ಡಾರ್ಜಿಲಿಂಗ್ ' ಗೆ ಹೋದಳು. ಅಲ್ಲಿ ಅವಳಿಗೆ ಸ್ವಾಮೀಜಿಯ ಧ್ವನಿ ಕೇಳಿಸಿತು !
ಸ್ವಾಮೀಜಿ ಹೇಳಿದರು "ಮಗು! ತುಂಬಾ ಕೆಲಸ ಮಾಡಿದ್ದೀಯ; ಸಾಕು; ಇನ್ನು ನನ್ನಲಿಗೆ ಬಂದುಬಿಡು! !
ನಿವೇದಿತಾ ಬರೆಯುತ್ತಾಳೆ " ಸ್ವಾಮೀಜಿಯ ಧ್ವನಿ ಕೇಳಿದ ಮೇಲೆ ನಾನು ಹೋಗಲೇಬೇಕಾಯಿತು! ! ತನ್ನ 43ನೇ
ವಯಸ್ಸಿನಲ್ಲಿ 'ಸೋದರಿ ನಿವೇದಿತಾ ' ದೇಹತ್ಯಾಗ ಮಾಡಿಬಿಟ್ಟಳು!! ಕೊನೆಗೂ ಆಕೆ ಪ್ರಾಣ ಬಿಟ್ಟಿದ್ದೂ ಭಾರತದಲ್ಲಿಯೇ! ! ಇಂದು 'ಡಾರ್ಜಿಲಿಂಗ್ ' ನಲ್ಲಿ ಇರುವ ಅವಳ ಸ್ಮಾರಕದ ಮೇಲೆ ಹೀಗೆ ಬರೆಯಲಾಗಿದೆ
" ಭಾರತಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಸೋದರಿ ನಿವೇದಿತಾ ಇಲ್ಲಿ ಶಾಂತವಾಗಿ ನಿದ್ರಿಸುತ್ತಿದ್ದಾಳೆ! ! "
ಇಂದು ಭಾರತದ ಪ್ರತಿಯೊಂದು ಮನೆಯಲ್ಲೂ ನಿವೇದಿತಾ ತರಹದ ಹೆಣ್ಣು ಮಕ್ಕಳು ಹುಟ್ಟಬೇಕು! ಆಗ ಈ ರಾಷ್ಟ್ರ 'ವಿಶ್ವಗುರು' ಆಗುವುದು ದೂರದ ಮಾತೇನಲ್ಲ ! !
ಏನಂತೀರ ?
ವಂದೇ ಮಾತರಂ
ಜೈ ಹಿಂದ್
Comments
Post a Comment