ಗೋವುಗಳಿಗೂ ಬರುತ್ತಿವೆ ಅಚ್ಚೇ ದಿನ್!
ಜಗತ್ತಿನಲ್ಲಿ ಗೋವನ್ನು ಪೂಜಿಸುವ ಏಕೈಕ ರಾಷ್ಟ್ರವೆಂದರೆ ಅದು ನಮ್ಮ ಭಾರತ ಮಾತ್ರ. ಅದರಲ್ಲೂ ಹಿಂದೂಗಳು ಗೋವನ್ನು ಅತ್ಯಂತ ಪೂಜ್ಯ ಭಾವದಿಂದ ಕಾಣುತ್ತಾರೆ. ಇವತ್ತಿಗೂ ನಾವು ಹಸುವನ್ನು 'ಗೋಮಾತೆ' ಎಂದೇ ಪೂಜಿಸುತ್ತೇವೆ.
ಪುರಾಣ ಕಾಲದಿಂದಲೂ ಕೂಡ ಗೋವಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಪ್ರತಿಯೊಬ್ಬ ಹಿಂದೂ ಕೂಡ ಹಸುವನ್ನು 'ದೇವರು' 'ತಾಯಿ' ಎಂಬ ಇತ್ಯಾದಿ ರೂಪದಿಂದ ಕಾಣುತ್ತಾನೆ. ಮೂವತ್ತು ಕೋಟಿ ದೇವತೆಗಳು ಹಸುವಿನಲ್ಲೇ ನೆಲೆಸಿದ್ದಾರೆ ಎಂದು ನಾವು ನಂಬಿದ್ದೇವೆ.
ಈ ದೇಶದ ಆದರ್ಶ ಪುರುಷರಾದ ಶ್ರೀರಾಮ ಹಾಗೂ ಶ್ರೀಕೃಷ್ಣ ಗೋವನ್ನು ಪ್ರೀತಿಸುತ್ತಿದ್ದ ವಿಷಯ ನಮಗೆಲ್ಲಾ ತಿಳಿದೇ ಇದೆ. ಅದರಲ್ಲೂ ಶ್ರೀಕೃಷ್ಣ ಗೋವನ್ನು ಹೆಚ್ಚು ಪ್ರೀತಿಸುತ್ತಿದ್ದ. ಅವನು ಎಲ್ಲಾ ಗೋವುಗಳೊಂದಿಗೆ ಸ್ನೇಹ ಭಾವದಿಂದಿದ್ದ. ಇವತ್ತಿಗೂ ನಾವು ಕೃಷ್ಣನನ್ನು ಪೂಜಿಸಿದರೆ ಸಾಕ್ಷಾತ್ 'ಗೋಮಾತೆ' ಯನ್ನೇ ಪೂಜಿಸಿದಂತೆ ಎಂದು ನಾವು ನಂಬಿದ್ದೇವೆ.
ಆದರೆ ದುರದೃಷ್ಟವಶಾತ್ ಇಂದು ಗೋವನ್ನು ಪೂಜಿಸೋದಿರಲಿ ಅವುಗಳನ್ನು ಸಂರಕ್ಷಿಸುವುದೇ ದೊಡ್ಡ ಕೆಲಸವಾಗಿದೆ. ಹೌದು ಯಾವ ಭಾರತದಲ್ಲಿ ಗೋಪೂಜೆ ನಡೆಯುತ್ತಿತ್ತೋ ಅದೇ ಭಾರತದಲ್ಲಿ ಇಂದು ಅವುಗಳ 'ಮಾರಣಹೋಮ' ನಡೆಯುತ್ತಿದೆ. ಭಾರತದಲ್ಲಿ ಇಂದು ಗೋಶಾಲೆಗಳು ತೆರೆಯಲು ಬದಲು ಕಸಾಯಿಖಾನೆಗಳು ತೆರೆಯುತ್ತಿವೆ!
ಲಕ್ಷಾಂತರ ಗೋವುಗಳನ್ನು ಮಾರಿ ಅವುಗಳನ್ನು ಕೊಂದು 'ಗೋಮಾಂಸ' ವನ್ನು ಸೇವಿಸಲಾಗುತ್ತಿದೆ. ಇದರಿಂದ ಲಕ್ಷಾಂತರ ಅಮಾಯಕ ಗೋವುಗಳ ದಹನವಾಗುತ್ತಿದೆ. ಜನಸಾಮಾನ್ಯರು ಮಾತ್ರ ಈ ವಿಷಯದಲ್ಲಿ ಅಸಹಾಯಕರಾಗಿದ್ದಾರೆ. ಮುಂದೊಂದು ದಿನ ಈ ಗೋವುಗಳ ಸಂತತಿ ಕೊನೆಗೊಂಡರೂ ಅಚ್ಚರಿಪಡಬೇಕಾಗಿಲ್ಲ!
ಯಾವ ಹಸುಗಳು ನಮಗೆ ನಿತ್ಯವೂ ಹಾಲನ್ನು ನೀಡುತ್ತಿತ್ತೊ; ಯಾವ ಹಸುವಿನ ಸಗಣಿಯನ್ನು ನಾವು ಗೊಬ್ಬರವಾಗಿ ಬಳಸುತ್ತಿದ್ದೇವೆಯೋ;
ಯಾವ ಗೋಮೂತ್ರದಿಂದ ನಾವು ವಿವಿಧ ಔಷಧಿಗಳನ್ನು ತಯಾರಿಸುತ್ತಿದ್ದೇವೆಯೋ;
ಯಾವ ಹಸುವಿನ ಹಾಲಿನಿಂದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇತ್ಯಾದಿಗಳನ್ನು ತಯಾರಿಸಿ ಸೇವಿಸುತ್ತಿದ್ದೇವೆಯೋ
ಯಾವ ಹಸುವಿನ ಪಾದಸ್ಪರ್ಶದಿಂದ ಆ ಭೂಮಿಯೇ ಪವಿತ್ರಗೊಳ್ಳುತ್ತದೆ ಎಂದು ನಮ್ಮ ಮನೆಯ ಗೃಹಪ್ರವೇಶದ ದಿನದಂದು ಹಸುವನ್ನು ನಮ್ಮ ಮನೆಗೆ ಕರೆಸುತ್ತೇವೆಯೋ;
ಯಾವ ಎತ್ತಿನಿಂದ ರೈತನು ಹೊಲವನ್ನು ಉಳುವನೋ
ಅದೇ ಗೋವುಗಳ ; ಅದೇ ಎತ್ತುಗಳ ಮರಣ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ನಾವು ಮಾತ್ರ ಸುಮ್ಮನೆ ಕೂತಿದ್ದೇವೆ! ಸರೀನ ಇದು?
ಪರಿಸ್ಥಿತಿ ಎಲ್ಲಿಯವರೆಗೆ ಕೈ ಮೀರಿ ಹೋಗಿದೆ ಅಂದರೆ ಬೆಂಗಳೂರಿನ ಆರೋಹಳ್ಳಿಯ ಕಸಾಯಿಖಾನೆಯನ್ನು ಮುಚ್ಚಿಸಲು ಒಂದು ಸತ್ಯಾಗ್ರಹ ಆಂದೋಲನವನ್ನೇ ನಡೆಸಿದರು !
ಇನ್ನೂ ಒಂದು ವಿಷಯ ಹೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ . . . . .
ಜಗತ್ತಿನಲ್ಲಿ ಗೋಮಾಂಸವನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದರಲ್ಲಿ ಭಾರತವೇ No 1!!
ಇನ್ನೂ ದುರ್ದೈವದ ಸಂಗತಿಯೇನೆಂದರೆ ಭಾರತದಲ್ಲಿ ಗೋಮಾಂಸ ಮಾರಾಟ ಮಾಡುವ ಆರು ಕಂಪೆನಿಗಳಲ್ಲಿ ಎರಡು ಕಂಪೆನಿಗಳ ಮಾಲೀಕರು ಹಿಂದೂಗಳೇ !
ಅಂದರೆ ಈಗಿನ ಕಾಲದಲ್ಲಿ ದುಡ್ಡಿನ ಆಸೆಗೆ ಜನ ತಮ್ಮ ಧರ್ಮವನ್ನೇ ಮರೆಯುತ್ತಾರೆ !
ಇವತ್ತಿಗೂ ಪಶ್ಚಿಮ ಬಂಗಾಳ , ಕೇರಳ , ನಾಗಾಲ್ಯಾಂಡ್ , ಅರುಣಾಚಲ ಪ್ರದೇಶ , ತ್ರಿಪುರ ಮುಂತಾದ ರಾಜ್ಯಗಳಲ್ಲಿ ಗೋಮಾಂಸ ಸೇವನೆಯ ಸಂಖ್ಯೆ ಹೆಚ್ಚಾಗಿದೆ . ಕರ್ನಾಟಕ ರಾಜ್ಯ ಇದರ ಹೊರತೇನಲ್ಲ ಬಿಡಿ .
ಹಾಗಾದರೆ ಗೋವುಗಳ ಸಮಸ್ಯೆ ಇಷ್ಟೇನ ? ಇಲ್ಲ! ಇನ್ನೂ ಸಾಕಷ್ಟಿವೆ . ಸಹಸ್ರಾರು ಗೋವುಗಳಿಗೆ ಇಂದು ತಿನ್ನಲು ಮೇವಿಲ್ಲ . ಕುಡಿಯಲು ನೀರಿಲ್ಲ . ಇದರಿಂದ ಎಷ್ಟೋ ಗೋವುಗಳು ಪ್ರಾಣ ಬಿಡುತ್ತಿವೆ . ಅವುಗಳ ಹಸಿವನ್ನು ನೀಗಿಸಲು ; ದಾಹವನ್ನು ತಣಿಸಲು ಯಾರೂ ಮುಂದೆ ಬರುತ್ತಿಲ್ಲ !
ಆದರೆ ಇಂದು ಭಾರತ ಬದಲಾಗುತ್ತಿದೆ !
ಹೌದು . .
ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ 'ಗೋಹತ್ಯೆ' ಯನ್ನು ನಿಷೇಧಿಸಿದೆ.
ನಿಜವಾಗಿಯೂ ಇದೊಂದು ಐತಿಹಾಸಿಕ ನಿರ್ಣಯವೇ ಸರಿ .
ಹಾಗಂತ ಗೋವುಗಳ ಸಮಸ್ಯೆ ಏಕ್ದಮ್ ಪರಿಹಾರವಾಗುವುದಿಲ್ಲವೆಂದು ನಾನೂ ಒಪ್ಪುತ್ತೇನೆ .
ಆದರೆ ಒಂದು ಒಳ್ಳೆಯ ಕೆಲಸ ಮಾಡಿದರೆ ಅದಕ್ಕೆ ಅನೇಕ ಅಡಚಣೆ ಉಂಟಾಗುವುದು ಸರ್ವೇ ಸಾಮಾನ್ಯ .
ಅಗಲೇ ಎಷ್ಟೋ ಪಕ್ಷಗಳು ಇದನ್ನು ಸಹಿಸದೆ ಪ್ರತಿಭಟನೆ ಮಾಡುತ್ತಿದ್ದಾರೆ .
ಕರ್ನಾಟಕದಲ್ಲಿ ಯಾರೋ ಪುಣ್ಯಾತ್ಮರು ನಾನು ಗೋಮಾಂಸ ತಿನ್ನುತ್ತೇನೆ ಏನೀಗ ಎಂದು ಹೇಳಿದರು .
ಕೇರಳದಲ್ಲಿ ಸಾರ್ವಜನಿಕವಾಗಿ ಗೋಹತ್ಯೆ ಮಾಡಿ ಆಗಲೇ ಅರೆಸ್ಟ್ ಆಗಿದ್ದಾರೆ 😂😂 . ಆದರೆ ಒಂದಂತೂ ನಿಜ ಉತ್ತರ ಪ್ರದೇಶದಲ್ಲಿ 'ಯೋಗಿ' ಯ ಆಗಮನದಿಂದ ಎಲ್ಲಾ ಕಸಾಯಿಖಾನೆಯನ್ನು ಮುಚ್ಚಲಾಗಿದೆ ಎಂದು ಹೇಳುತ್ತಾರೆ . ಹಾಗೆನೇ ಕರ್ನಾಟಕ ರಾಜ್ಯದಲ್ಲಿಯೂ ಈ ತರಹದ ಬದಲಾವಣೆಗಳನ್ನು ಮಾಡಬೇಕಾಗಿದೆ . ಒಟ್ಟಿನಲ್ಲಿ ನಮಗೂ ಹಾಗೂ ಗೋವುಗಳಿಗೆ 'ಅಚ್ಚೇ ದಿನ್ ' ಬರುತ್ತಿವೆ!
ಈ ನಿರ್ಣಯದಿಂದ ಭಾರತ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದೆ !
ಭಾರತ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ . . . .
#ಅಚ್ಚೇದಿನ್ಆಗಯಾ
Comments
Post a Comment