Posts

Showing posts from July, 2017

ಕಾರ್ಗಿಲ್ ಕದನ - "ರೋಚಕವಾದ ಕದನ"!

Image
ಒಬ್ಬ ದಾರ್ಶನಿಕ ತುಂಬ ಚೆನ್ನಾಗಿ ಹೇಳುತ್ತಾನೆ - "ನಮಗೆ ಕಷ್ಟಗಳು ಬಂದಾಗ ದೇವರು ಆಗ ನೆನಪಾಗುತ್ತಾನೆ.." ಸಂಕಟ ಬಂದಾಗ ವೆಂಕಟರಮಣ "ಎಂದು. ನಮಗೆ ರೋಗ ಬಂದಾಗ ಆಗ ವೈದ್ಯರು ನೆನಪಾಗುತ್ತಾರೆ. ಹಾಗೆಯೇ ಯುದ್ಧ ಬಂದಾಗ ಮಾತ್ರ ನಮಗೆ ಸೈನಿಕರು ನೆನಪಿಗೆ ಬರುತ್ತಾರೆ" ಎಂದು! ಹೌದು;  ಭಾರತ ಮಾತೆಯ ರಕ್ಷಣೆಗಾಗಿ ತನ್ನ ಇಡೀ ಜೀವನವನ್ನು ಅವಳಿಗಾಗಿ ಸಮರ್ಪಿಸುವ ಈ ದೇಶದ ಎಲ್ಲಾ "Hero" ಗಳಿಗೆ ಈ ಲೇಖನವನ್ನು ಅರ್ಪಿಸುತ್ತಿದ್ದೇನೆ. ನಿಜವಾದ "Hero" ಇವರೇ ಅಲ್ಲವೇ?  ಭಾರತ ಎಂಬ ಸುಂದರ ರಾಷ್ಟ್ರದ ಮೇಲೆ ಹಲವರ 'ಕಣ್ಣುಗಳು' ಬಿದ್ದವು ಹಾಗೂ ಈಗಲೂ ಬೀಳುತ್ತಿವೆ! ಅನೇಕ ರಾಷ್ಟ್ರಗಳು ನಮ್ಮ ಮೇಲೆ ದಾಳಿ ನಡೆಸಿದರೂ ಅವೆಲ್ಲವನ್ನೂ ಮೆಟ್ಟಿ ನಿಂತ ಜಗತ್ತಿನ ಏಕೈಕ ರಾಷ್ಟ್ರವೆಂದರೆ ಅದು ನಮ್ಮ ಭಾರತ ಮಾತ್ರ! ಈ ದೇಶವನ್ನು ಬ್ರಿಟಿಷರು ಕೇವಲ ಆಳಲಿಲ್ಲ ಜೊತೆಯಲ್ಲಿ 'ಲೂಟಿ' ಮಾಡಿದರು. ನಮಗೆ ಸ್ವಾತಂತ್ರ್ಯದ ಜೊತೆಗೆ ಅವರು ಕೊಟ್ಟ ಉಡುಗೊರೆ ಏನೆಂದರೆ 'ದೇಶವಿಭಜನೆ'! ಪಾಕಿಸ್ತಾನ ಎಂಬ ರಾಷ್ಟ್ರ ಅಸ್ತಿತ್ವಕ್ಕೆ ಬಂತು. ಆದರೆ ಅವರಿಗೆ ತೃಪ್ತಿ ಅನ್ನೋದೇ ಇಲ್ಲ. ಈ ದೇಶದ "ಕಿರೀಟ" ವನ್ನೇ ಕಸಿಯಲು ಪ್ರಯತ್ನಿಸುತ್ತಿದೆ. ಮುಂದೆ ಭಾರತವೇ ನಮ್ಮದು ಎಂದು ಅವರು ಹೇಳಿದರೂ ಅಚ್ಚರಿ ಪಡಬೇಕಾಗಿಲ್ಲ!  ಪಾಕಿಸ್ತಾನ ಇಲ್ಲಿವರೆಗೂ ನಮ್ಮ ಮೇಲೆ ನಾಲ್ಕು ಬಾರಿ ದಾಳಿ ಮಾಡಿದೆ. ನಾಲ್ಕ...