ಕಾರ್ಗಿಲ್ ಕದನ - "ರೋಚಕವಾದ ಕದನ"!
ಒಬ್ಬ ದಾರ್ಶನಿಕ ತುಂಬ ಚೆನ್ನಾಗಿ ಹೇಳುತ್ತಾನೆ - "ನಮಗೆ ಕಷ್ಟಗಳು ಬಂದಾಗ ದೇವರು ಆಗ ನೆನಪಾಗುತ್ತಾನೆ.." ಸಂಕಟ ಬಂದಾಗ ವೆಂಕಟರಮಣ "ಎಂದು. ನಮಗೆ ರೋಗ ಬಂದಾಗ ಆಗ ವೈದ್ಯರು ನೆನಪಾಗುತ್ತಾರೆ. ಹಾಗೆಯೇ ಯುದ್ಧ ಬಂದಾಗ ಮಾತ್ರ ನಮಗೆ ಸೈನಿಕರು ನೆನಪಿಗೆ ಬರುತ್ತಾರೆ" ಎಂದು! ಹೌದು; ಭಾರತ ಮಾತೆಯ ರಕ್ಷಣೆಗಾಗಿ ತನ್ನ ಇಡೀ ಜೀವನವನ್ನು ಅವಳಿಗಾಗಿ ಸಮರ್ಪಿಸುವ ಈ ದೇಶದ ಎಲ್ಲಾ "Hero" ಗಳಿಗೆ ಈ ಲೇಖನವನ್ನು ಅರ್ಪಿಸುತ್ತಿದ್ದೇನೆ. ನಿಜವಾದ "Hero" ಇವರೇ ಅಲ್ಲವೇ? ಭಾರತ ಎಂಬ ಸುಂದರ ರಾಷ್ಟ್ರದ ಮೇಲೆ ಹಲವರ 'ಕಣ್ಣುಗಳು' ಬಿದ್ದವು ಹಾಗೂ ಈಗಲೂ ಬೀಳುತ್ತಿವೆ! ಅನೇಕ ರಾಷ್ಟ್ರಗಳು ನಮ್ಮ ಮೇಲೆ ದಾಳಿ ನಡೆಸಿದರೂ ಅವೆಲ್ಲವನ್ನೂ ಮೆಟ್ಟಿ ನಿಂತ ಜಗತ್ತಿನ ಏಕೈಕ ರಾಷ್ಟ್ರವೆಂದರೆ ಅದು ನಮ್ಮ ಭಾರತ ಮಾತ್ರ! ಈ ದೇಶವನ್ನು ಬ್ರಿಟಿಷರು ಕೇವಲ ಆಳಲಿಲ್ಲ ಜೊತೆಯಲ್ಲಿ 'ಲೂಟಿ' ಮಾಡಿದರು. ನಮಗೆ ಸ್ವಾತಂತ್ರ್ಯದ ಜೊತೆಗೆ ಅವರು ಕೊಟ್ಟ ಉಡುಗೊರೆ ಏನೆಂದರೆ 'ದೇಶವಿಭಜನೆ'! ಪಾಕಿಸ್ತಾನ ಎಂಬ ರಾಷ್ಟ್ರ ಅಸ್ತಿತ್ವಕ್ಕೆ ಬಂತು. ಆದರೆ ಅವರಿಗೆ ತೃಪ್ತಿ ಅನ್ನೋದೇ ಇಲ್ಲ. ಈ ದೇಶದ "ಕಿರೀಟ" ವನ್ನೇ ಕಸಿಯಲು ಪ್ರಯತ್ನಿಸುತ್ತಿದೆ. ಮುಂದೆ ಭಾರತವೇ ನಮ್ಮದು ಎಂದು ಅವರು ಹೇಳಿದರೂ ಅಚ್ಚರಿ ಪಡಬೇಕಾಗಿಲ್ಲ! ಪಾಕಿಸ್ತಾನ ಇಲ್ಲಿವರೆಗೂ ನಮ್ಮ ಮೇಲೆ ನಾಲ್ಕು ಬಾರಿ ದಾಳಿ ಮಾಡಿದೆ. ನಾಲ್ಕು ಯುದ್ಧದಲ್ಲಿಯೂ 'ಹೊಡೆಸಿಕೊಂಡು' ಮನೆಗೆ ಓಡಿ ಹೋಗಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಪಾಕಿಸ್ತಾನ ದಾಳಿ ನಡೆಸಿತು. ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು. ತುರ್ತು ಪರಿಸ್ಥಿತಿಯಲ್ಲಿ ಈ ದೇಶದ ಸೈನಿಕರು ಹೋರಾಡಬೇಕಾಯಿತು. ಆದರೆ ಅವರಿಗೆ ದೇಶವೇ ಮೊದಲು. ಭಾರತೀಯ ಸೈನಿಕರ ಶೌರ್ಯಕ್ಕೆ ಪಾಕಿಸ್ತಾನ ಸೋಲೊಪ್ಪಿಕೊಂಡಿತು! ಆದರೆ ಆಗಿನ ಪ್ರಧಾನಿಗೆ ಈ ದೇಶವನ್ನು ಆಳುವ ವಿಧಾನವೇ ತಿಳಿದಿರಲಿಲ್ಲ. ಈ ದೇಶದ ಅನೇಕರು ಪ್ರಧಾನಿಯವರಿಗೆ ಚೀನಾ ನಮ್ಮ ಮೇಲೆ ಆಕ್ರಮಣ ಮಾಡಲು ಸಜ್ಜಾಗಿದೆ. ಅವರು ಆಗಲೇ ನಮ್ಮ ಗಡಿಯನ್ನು ದಾಟಿ ಬಂದಿದ್ದಾರೆ ಎಂದು ಎಚ್ಚರಿಕೆ ನೀಡಿದರೇ ನೆಹರೂ ಅವರು "ಚೇ ಚೇ. ಸಾಧ್ಯವೇ ಇಲ್ಲ. ಅವರು ಯಾವತ್ತಿದ್ದರೂ ನಮ್ಮ ಸ್ನೇಹಿತರು. 'ಹಿಂದಿ-ಚೀನಿ ಭಾಯಿ ಭಾಯಿ' ಎಂದು ವೇದವಾಕ್ಯ ನುಡಿದರು! ಪಾಪ ಚೀನಾದವರಿಗೆ ಹಿಂದಿ ಅರ್ಥವಾಗಲಿಲ್ಲ ಹಾಗಾಗಿ ಅವರ ಬೆನ್ನಿಗೆ ಚೂರಿ ಇಟ್ಟರು. 1962ರಲ್ಲಿ ಮೊದಲನೆಯ ಬಾರಿಗೆ ಚೀನಾ ನಮ್ಮ ಮೇಲೆ ಆಕ್ರಮಣ ಮಾಡಿತು. ಅವರ ಬಳಿ ಆಧುನಿಕವಾದ ಶಸ್ತ್ರಗಳಿದ್ದವು. ನಮ್ಮವರ ಬಳಿ ರೈಫಲ್ ಗಳೇ ಇರಲಿಲ್ಲ! ಬೇರೆ ದಾರಿಯಿಲ್ಲದೇ ನಮ್ಮ ಸೈನಿಕರು ಕಾಳಗಕ್ಕೆ ಸಜ್ಜಾದರು. ಯುದ್ಧವು ಅತ್ಯಂತ ತೀವ್ರವಾಗಿ ನಡೆಯಿತು. ದುರದೃಷ್ಟವಶಾತ್ ಭಾರತ ಈ ಯುದ್ಧದಲ್ಲಿ ಪೂರ್ಣ ಪ್ರಮಾಣದಲ್ಲಿ ಸೋತಿ ಹೋಯಿತು. ಯಾರೂ ಕೂಡ ಊಹಿಸಿರಲಿಲ್ಲ!! ಇದೇ ಸಮಯಕ್ಕೆ ಸರಿಯಾಗಿ ನೆಹರೂ ಅವರು ತೀರಿಕೊಂಡರು. ಆಗಲೇ ಈ ದೇಶ ಒಬ್ಬ ಶ್ರೇಷ್ಠವಾದ ಪ್ರಧಾನಿಯನ್ನು ಪಡೆಯಿತು. ಅವರ ಹೆಸರೇ 'ಲಾಲ್ ಬಹದ್ದೂರ್ ಶಾಸ್ತ್ರಿ' ಅಂತ. ಈ ಮನುಷ್ಯ ನೋಡೋಕೆ ತುಂಬಾ ಸರಳ ಆದರೆ ಅಷ್ಟೇ 'ಖಡಖ್' ಮನುಷ್ಯ!
ಆಗಲೇ ಪಾಕಿಸ್ತಾನ ಈಗಲೇ ಸರಿಯಾದ ಸಮಯ ಈಗ ಭಾರತದ ಮೇಲೆ ದಾಳಿ ಮಾಡಿದರೆ ಕಾಶ್ಮೀರ ನಮ್ಮದೇ ಎನ್ನುವ ಮಟ್ಟಿಗೆ ಆಲೋಚಿಸಿದರು. ಎಲ್ಲಿಯವರೆಗೆ ಅಂದರೆ ಮಧ್ಯಾಹ್ನದ ಊಟವನ್ನು ಅಮೃತ್ಸರದಲ್ಲಿ ಮಾಡಿದರೆ ರಾತ್ರಿಯ ಊಟವನ್ನು ದೆಹಲಿಯಲ್ಲಿ ಮಾಡೋಣವೆಂದು ಆಲೋಚನೆ ಮಾಡಿದ್ದರು! ಅದಕ್ಕೆ ಹಿರಿಯರು ಹೇಳಿದ್ದು - 'ಆಸೆಯೇ ದುಃಖಕ್ಕೆ ಮೂಲ' ಎಂದು! ಆದರೆ ಆಗ ಅಮೇರಿಕಾ ಪಾಕಿಸ್ತಾನದ ಬೆಂಬಲಕ್ಕೆ ನಿಂತಿತು! ಅಮೇರಿಕಾದದಿಂದ ಅತ್ಯಾಧುನಿಕವಾದ 'ಪೆಟೆಂಟ್' ಟ್ಯಾಂಕ್ ಅನ್ನು ಪಡೆದರು. ನಮ್ಮದು ಎರಡನೇ ಮಹಾಯುದ್ಧದಲ್ಲಿ ಬಳಸಿದ್ದ ತುಕ್ಕು ಹಿಡಿದಿದ್ದ 'ಸೆಂಚೂರಿಯನ್' ಟ್ಯಾಂಕ್! ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸೈನಿಕರು ಹೋರಾಡಬೇಕಾಯಿತು! ಈ ದೇಶದ ಪ್ರಧಾನಿ "ಪಾಕಿಸ್ತಾನದ ಗಡಿಗೆ ನುಗ್ಗಿ ಆಕ್ರಮಣ ಮಾಡಿ" ಎಂದು ಸೈನಿಕರಿಗೆ ಆದೇಶವನ್ನು ನೀಡಿದರು! "ಬರೀ ಜೈ ಕಿಸಾನ್ ಎಂದರೆ ಸಾಲದು..." ಜೈ ಜವಾನ್ "ಎಂದು ಹೇಳಬೇಕು" ಎಂದು ಹೇಳಿದ ಮೊದಲ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ!
ಯುದ್ಧದ ಆರಂಭದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿತು.
ಆದರೆ ನಂತರ ಪಾಕಿಸ್ತಾನದ ಪೆಟೆಂಟ್ ಟ್ಯಾಂಕರನ್ನು ಈ ದೇಶದ ಸೈನಿಕರು ಧ್ವಂಸಗೊಳಿಸಿದರು! ಎಲ್ಲಿಯವರೆಗೂ ಎಂದರೆ ಒಂದೇ ದಿನದಲ್ಲಿ 30 ಕ್ಕಿಂತ ಹೆಚ್ಚು ಪೆಟೆಂಟ್ ಟ್ಯಾಂಕರ್ ಗಳನ್ನು ಈ ದೇಶದ ಸೈನಿಕರು ಧ್ವಂಸಗೊಳಿಸಿದರು! ಅಂತೂ ಪಾಕಿಸ್ತಾನ ಸೋಲೊಪ್ಪಿಕೊಳ್ಲಬೇಕಾಯಿತು. ಚೀನಾದ ಮೇಲಿನ ಸೋಲಿನ ಸೇಡಿಗೆ ಪಾಪ ಪಾಕಿಸ್ತಾನ ಬಲಿಯಾಯಿತು.
ಎಷ್ಟಾದರೂ ನಾಯಿ ಬಾಲ ಯಾವತ್ತಿದ್ದರೂ ಡೊಂಕೇ!
1971 ರಲ್ಲಿ ಪಾಕಿಸ್ತಾನ ಮತ್ತೆ ಭಾರತದ ಮೇಲೆ ದಾಳಿ ಮಾಡಿತು. ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ.
ಈ ಬಾರಿಯೂ ಪಾಕಿಸ್ತಾನ ಸೋತು ಸುಣ್ಣವಾಯಿತು..
ಹೀಗೆ ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯ ಬೆಳೆಯುವ ಯಾವ ಲಕ್ಷಣವೂ ಕಾಣಲಿಲ್ಲ. ಅಂತೂ ಈ ದೇಶಕ್ಕೆ ಮತ್ತೊಬ್ಬ ಶ್ರೇಷ್ಠ ರತ್ನವೊಂದನ್ನು ಕಂಡಿತು. ಆ ರತ್ನವೇ 'ಅಟಲ್ ಬಿಹಾರಿ ವಾಜಪೇಯಿ'! ಪಾಕಿಸ್ತಾನದ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸುವ ಸಲುವಾಗಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಬಸ್ ಸಂಚಾರವನ್ನು ಪ್ರಾರಂಭಿಸಿದರು.. ಈ ದೇಶದ ಪ್ರಧಾನಿ ನವಾಜ್ ಶರೀಫ್ ಅವರ ಜೊತೆ ಸ್ನೇಹದ ಅಪ್ಪುಗೆಯ ಸಮಯದಲ್ಲೇ ಪಾಪಿ ಪಾಕಿಸ್ತಾನ ಮತ್ತೆ ತನ್ನ ಬುದ್ದಿಯನ್ನು ತೋರಿಸಿಬಿಟ್ಟಿತು! ಆಗ ಚಳಿಗಾಲದ ಸಮಯ.. 'ಕಾರ್ಗಿಲ್' ಮತ್ತೆ ಇತರ ಸ್ಥಳಗಳಲ್ಲಿ ವಿಪರೀತ ಚಳಿ.. ಈ ಸಮಯದಲ್ಲಿ ಅಲ್ಲಿರುವ ಭಾರತೀಯ ಸೈನಿಕರು ಹಾಗೂ ಪಾಕ್ ಸೈನಿಕರು ಗುಡ್ಡಗಳಿಂದ ಕೆಳಗಿಳಿಯುತ್ತಾರೆ... ಆದರೆ ಪಾಕಿಸ್ತಾನ ಇದೇ ಸರಿಯಾದ ಸಮಯವೆಂದು ತಿಳಿದು ಕಾರ್ಗಿಲ್ ಹಾಗೂ ಇನ್ನೂ ಅನೇಕ ಗುಡ್ಡಗಳನ್ನು ವಶಪಡಿಸಿಕೊಂಡಿತು.. ಇಷ್ಟೇ ಅಲ್ಲದೇ ನಮ್ಮ ದೇಶದ ಸೈನಿಕರ ರುಂಡವನ್ನು ಕತ್ತರಿಸಿ ಅವರ ಶವವನ್ನು ಈ ದೇಶದ ಸರ್ಕಾರಕ್ಕೆ ಪಾರ್ಸಲ್ ಮಾಡಿತು.. ಇಡೀ ದೇಶ ಕಳವಳಗೊಂಡಿತು! ಪಾಕಿಸ್ತಾನ ವಾಜಪೇಯಿ ಅವರ ಸ್ನೇಹಕ್ಕೆ ದ್ರೋಹ ಎಸಗಿತು! ಪಾಕಿಸ್ತಾನಕ್ಕೆ ಈ ಬಾರಿ ಸರಿಯಾದ ಪಾಠವನ್ನು ಕಲಿಸಬೇಕೆಂದು ನಿಶ್ಚಯಿಸಿದರು.
'Operation Kargil ' ಶುರುವಾಯಿತು!
ಈ ದೇಶದ ಸೈನಿಕರಿಗೆ ಹೋರಾಡಲು ಉತ್ತೇಜನವನ್ನು ನೀಡಿದರು. ಈ ಬಾರಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿತ್ತು. ಈ ಬಾರಿ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕೆಂದು ನಿಶ್ಚಯಿಸಿದರು. ಈ ಕದನದಲ್ಲಿ ಅನೇಕ ' Hero' ಗಳು ಬರುತ್ತಾರೆ. ಅದರಲ್ಲಿ 'Grenadiar ಯೋಗೇಂದ್ರ ಸಿಂಗ್ ಯಾದವ್' ಕೂಡ ಒಬ್ಬರು.
ಈತನ ಕತೆಯನ್ನು ನೀವು ಕೇಳಬೇಕು... ಶತ್ರುಗಳ ಮೇಲೆ ಈತ ವೀರಾವೇಶದಿಂದ ಹೋರಾಡಿದರು. ಆದರೆ ತನ್ನ ಜೊತೆಯಲ್ಲಿದ್ದ ಎಲ್ಲಾ ಸೈನಿಕರನ್ನು ಕಳೆದುಕೊಂಡರು.. ಪಾಕ್ ಸೈನಿಕರ ದಾಳಿ ವಿಪರೀತವಾಯಿತು.. ಈತ ಒಂದು ಉಪಾಯ ಮಾಡಿದರು.. ತಾನೂ ಸತ್ತಂತೆಯೇ ಬಿದ್ದುಕೊಂಡರು.. ಆದರೆ ಪಾಕಿಸ್ತಾನ ತುಂಬಾ ಚಾಲಾಕಿಗಳು! ಸತ್ತವರ ಮೇಲೂ ಗುಂಡನ್ನು ಹಾರಿಸಿದರು.. ಬದುಕಿದ್ದ ಯೋಗೇಂದ್ರ ಸಿಂಗ್ ಯಾದವ್ ಅವರ ಮೇಲೆ ಹದಿನೈದಕ್ಕಿಂತ ಹೆಚ್ಚು ಗುಂಡು ಹಾರಿದವು... ಪಾಕ್ ಸೈನಿಕರು ಎಲ್ಲರು ಸತ್ತಿದ್ದಾರೆಂದು ಭಾವಿಸಿ ಹೊರಟುಹೋದರು.. ಆದರೆ ಯೋಗೇಂದ್ರ ಸಿಂಗ್ ಯಾದವ್ ಅವರು ಕಷ್ಟ ಪಟ್ಟು ಮೇಲೆದ್ದು ತಮ್ಮ ಬಳಿ ಇದ್ದ ಕೊನೆಯ 'Grenade' ಅನ್ನು ತೆಗೆದು ಪಾಕ್ ಸೈನಿಕರ ಮೇಲೆ ಎಸೆದರು.. ನಿಮಿಷದಲ್ಲಿ ಪಾಕ್ ಸೈನಿಕರು ಸುಟ್ಟು ಬೂದಿಯಾದರು! ಆ ಪರಿಸ್ಥಿತಿಯಲ್ಲೂ ಯೋಗೇಂದ್ರ ಸಿಂಗ್ ಯಾದವ್ ಅವರು ಯುದ್ಧವನ್ನು ಮುಂದುವರೆಸುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುತ್ತಾರಲ್ಲಾ ನಿಜಕ್ಕೂ ಅವರ ದೇಶ ಪ್ರೇಮ ಅದ್ಭುತವಾದದ್ದು! ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿ ಬದುಕುಳಿದ ಕೆಲವು ಸೈನಿಕರಲ್ಲಿ ಇವರೂ ಒಬ್ಬರು!
ಇನ್ನು ಮತ್ತೊಬ್ಬ ವೀರನೆಂದರೆ ಅದು 'Captain ವಿಕ್ರಂ ಭಾತ್ರ'. ಈತನಿಗೆ ಹೆಚ್ಚೆಂದರೆ 25-26 ವಯಸ್ಸು ಅಷ್ಟೇ! ಬಿಸಿ ರಕ್ತ ಬೇರೆ! 'ತೋಲೋಲಿನ್' ಎಂಬ ಗುಡ್ಡವನ್ನು ಅವನ ನಾಯಕತ್ವದಲ್ಲೇ ಭಾರತ ಗೆದ್ದಿತು!
ಸಂದರ್ಶನದಲ್ಲಿ ಪತ್ರಿಕೆಯವಳು "Captain, ಒಂದು ಗುಡ್ಡವನ್ನು ಗೆದ್ದಿದ್ದೀರ ಖುಷಿ ಆಯ್ತಾ? ಎಂದು ಕೇಳಿದಳು.
ವಿಕ್ರಮ್ ಭಾತ್ರ" ಖುಷಿ ಏನೋ ಆಯ್ತು ; ಆದರೆ 'ತೃಪ್ತಿ' ಆಗಿಲ್ಲ! ಯಾಕೆಂದ್ರೆ "ಹೇ ದಿಲ್ ಮಾಂಗೇ ಮೋರ್!!!" ಎಂದು ಘರ್ಜಿಸಿದ ಈ ಪುಣ್ಯಾತ್ಮ!
ಆದರೆ ದೇವರ ಇಚ್ಛೆ ಬೇರೆ ಏನೋ ಇದ್ದಂತಿತ್ತು.
ಮರುದಿನ ಅದೇ ಉತ್ಸಾಹದಲ್ಲಿ ಇನ್ನೊಂದು ಗುಡ್ಡವನ್ನು ಗೆಲ್ಲಲು ಹೊರಟ.. ಕದನ ಬಹಳ ಹೊತ್ತು ಏನು ನಡೆಯಲಿಲ್ಲ.. ಶತ್ರು ಸೈನಿಕನ ಮೇಲೆ ಗುಂಡನ್ನು ಹಾರಿಸುವ ಹೊತ್ತಿಗೆ ಪಾಕ್ ಸೈನಿಕನ ಗುಂಡು ಅವನ ಎದೆಯನ್ನು ಸೀಳಿಬಿಟ್ಟಿತು! Captain ವಿಕ್ರಂ ಭಾತ್ರ ಅಮರನಾದ!
ಇಡೀ ಭಾರತೀಯ ಸೈನ್ಯ ಅವನ ಸಾವಿನ ವಿಷಯವನ್ನು ಕೇಳಿ ಕಣ್ಣೀರಿಟ್ಟರು.. ನನಗೆ ಹೊಟ್ಟೆ ಉರಿಯೋದು ಯಾಕೆ ಗೊತ್ತಾ? ಆತ ಸತ್ತಾಗ ಅವನ ವಯಸ್ಸು ಕೇವಲ 25-26 ವರ್ಷ! ಯುದ್ಧ ತೀವ್ರ ಗತಿಯಲ್ಲಿ ಸಾಗಿತು..
ಅಂತೂ ಪಾಕಿಸ್ತಾನದ ಯುದ್ಧದ ಎಲ್ಲಾ ಉಪಾಯಗಳು ಫಲಿಸದಿದ್ದಾಗ ; ಪಾಕಿಸ್ತಾನ ಪೂರ್ಣ ಪ್ರಮಾಣದಲ್ಲಿ ಸೋತು ಹೋಯಿತು! ಭಾರತ ಸತತವಾಗಿ ನಾಲ್ಕನೇ ಬಾರಿಗೆ ಪಾಕಿಸ್ತಾನವನ್ನ ಸೋಲಿಸಿತು! ಕಾರ್ಗಿಲ್ ಯುದ್ಧದಲ್ಲಿ ಭಾರತ ತನ್ನ ವಿಜಯ ಪತಾಕೆಯನ್ನು ಹಾರಿಸಿತು! ಯುದ್ಧ ಮುಗಿದ ಮೇಲೆ ವಾಜಪೇಯಿ ಅವರು ಗಾಯಗೊಂಡ ಸೈನಿಕರ ಆರೋಗ್ಯವನ್ನು ವಿಚಾರಿಸಲು ಆಸ್ಪತ್ರೆಗೆ ಬಂದರು.
ಆಗ ಹಾಸಿಗೆಯ ಮೇಲೆ ಮಲಗಿದ್ದ ಒಬ್ಬ ಗಾಯಗೊಂಡ ಸೈನಿಕ ಕಷ್ಟ ಪಟ್ಟು ಮೇಲೆದ್ದು ಪ್ರಧಾನಿಯವರಿಗೆ ನಮಸ್ಕರಿಸಿ ಹೀಗೆ ಹೇಳಿದನು "ಸರ್ ; ಈ ದೇಶದ ಜನ ನಿಮ್ಮ ಮಾತನ್ನು ಕೇಳುತ್ತಾರೆ! ಅವರಿಗೆಲ್ಲಾ ಒಂದೇ ಒಂದು ಮಾತು ಹೇಳಿ. ಅದೇನೆಂದರೆ ಈ ದೇಶದ ಸೈನಿಕರು ಪಾಕಿಸ್ತಾನೀಯರ ಗುಂಡಿಗೆ "ಬೆನ್ನು ಕೊಡಲಿಲ್ಲ! ಬದಲಾಗಿ ಎದೆಯನ್ನು ಕೊಟ್ಟರು!" ಎಂದು ಒಮ್ಮೆ ಹೇಳಿಬಿಡಿ! "
ನಿಜ! ಚಂದ್ರಶೇಖರ್ ಆಜಾದ್ ಅವರು ಹೇಳಿದಂತೆ
" ದುಶ್ಮನೋಂಕೆ ಗೋಲಿಯೋಂಕೋ ಹಮ್ ಸಾಮ್ನ ಕರೇಂಗೆ "ಎಂದು ಈ ದೇಶದ ಸೈನಿಕರು ಎದುರಾಳಿಗಳ ಗುಂಡಿಗೆ ಎದೆ ಕೊಟ್ಟರು!
ಹೀಗೆ ನಮಗಾಗಿ ಪ್ರಾಣ ಕೊಡುವ ಈ ದೇಶ ಭಕ್ತರನ್ನು ಗೌರವಿಸುವುದ ನಮ್ಮ ಕರ್ತವ್ಯ! ಭಗವಂತನಲ್ಲಿ ಬೇಡಿಕೊಳ್ಳುವಾಗ ಈ ದೇಶದ ಸೈನಿಕರಿಗೆ ಹೋರಾಡಲು ಇನ್ನೂ ಹೆಚ್ಚು ಶಕ್ತಿಯನ್ನು ನೀಡು ಎಂದು ಕೇಳಿಕೊಳ್ಳಬೇಕು.
ಅವರಿದ್ದರೆ ನಾವು ಇಲ್ಲವೆಂದರೆ ನಾವೂ ಇಲ್ಲ ಈ ಭಾರತವೂ ಇರುವುದಿಲ್ಲ.. ಭಾರತ ಈಗ ಹಿಂದೆಂದಿಗಿಂತಲೂ ಬಲಶಾಲಿಯಾಗಿದೆ. ಭಾರತ ಕಾರ್ಗಿಲ್ ಯುದ್ಧವನ್ನು ಗೆದ್ದ ದಿವಸ ಜುಲೈ 26... ಪ್ರತಿವರ್ಷ ಈ ದಿನದಂದು ದೇಶಾದ್ಯಂತ "ಕಾರ್ಗಿಲ್ ವಿಜಯ್ ದಿವಸ್" ಎಂದು ಆಚರಿಸಲಾಗುತ್ತದೆ!
ರಾಷ್ಟ್ರಕ್ಕೆ ಇಂತಹ ಅನೇಕ ಯುವಕರ ಅವಶ್ಯಕತೆ ಇದೆ..
#ಜೈಜವಾನ್
ವಂದೇ
Comments
Post a Comment