Posts

Showing posts from January, 2020

ವೀರಕೇಸರಿ ವಿವೇಕಾನಂದ!

Image
ಅದು ಜನವರಿ ತಿಂಗಳ ಮಾಗಿಯ ಕಾಲದ ಪುಣ್ಯ ದಿನ. ಕನ್ಯಾಕುಮಾರಿಯ ಪವಿತ್ರ ದೇವಸ್ಥಾನದಲ್ಲಿ ಅರ್ಚಕರು ಮುಂಜಾನೆಯಲ್ಲಿ ಎಂದಿನಂತೆ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ನಿರತರಾಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಆ ಅರ್ಚಕರ ಗಮನ ದೇವಸ್ಥಾನದ ಹೆಬ್ಬಾಗಿಲ ಕಡೆಗೆ ಹೋಯಿತು. ಯಾರೋ ತರುಣ ಸಂನ್ಯಾಸಿ ಒಳಗೆ ಪ್ರವೇಶಿಸಿದ. ದೇವರಿಗೆ ಉದ್ದಂಡ ನಮಸ್ಕರಿಸಿ ಎದ್ದು ನಿಂತನು. ಅರ್ಚಕನು ಆ 'ಮೂವತ್ತರ ಹರೆಯದ' ಆ ಸಂನ್ಯಾಸಿಯನ್ನೇ ದಿಟ್ಟಿಸಿ ನೋಡುತ್ತಿದ್ದ. ಸುಮಾರು ಐದುಮುಕ್ಕಾಲು ಅಡಿ ಎತ್ತರದ ಜೀವವದು, ವಿಶಾಲವಾದ ಬಾಹುಗಳನ್ನು ಹೊಂದಿದ್ದ ಆ ಸಂನ್ಯಾಸಿ ಥೇಟ್ ಕುಸ್ತಿ ಪಟುವಿನಂತೆ ಕಾಣುತ್ತಿದ್ದ. ವಜ್ರಶರೀರಿಯಾಗಿದ್ದ ಆತನ ದೇಹ ಮತ್ತು ಕಬ್ಬಿಣದ ಮಾಂಸಖಂಡಗಳನ್ನು ಹೊಂದಿದ್ದ ಆತ ಯಾವುದೇ ಕ್ರೀಡೆ ಬೇಕಾದರೂ ಲೀಲಾಜಾಲವಾಗಿ ಆಡಲು ಸಿದ್ಧನಾಗಿದ್ದನು! ಅವನ ಮನಮೋಹಕ ನಯನಗಳು ಎಂಥವರನ್ನಾದರೂ ಆಕರ್ಷಿಸುವಂತಿತ್ತು! ಅವನ ಕಣ್ಣುಗಳಲ್ಲಿ ಸಾಕ್ಷಾತ್ ಪರಶಿವನು ತಾಂಡವವಾಡುತ್ತಿದ್ದನು! ಅಲ್ಲಿದ ಎಲ್ಲಾ ಸಂನ್ಯಾಸಿಗಳಿಗಿಂತಲೂ ಭಿನ್ನನಾಗಿದ್ದನು ಆತ. ಒಂದು ಕೈಯಲ್ಲಿ ಕಮಂಡಲ, ಇನ್ನೊಂದು ಕೈಯಲ್ಲಿ 'ಭಗವದ್ಗೀತೆ' ಮತ್ತು 'ಬೈಬಲ್'. ಒಬ್ಬ ಸಂನ್ಯಾಸಿಯ ಬಳಿ ಇಷ್ಟಲ್ಲದೇ ಇನ್ನೇನು ಇರಬಲ್ಲದು? ತಲೆಗೆ ಸುತ್ತಿಕೊಂಡು ಪೇಟ ಅವನ ಸೌಂದರ್ಯವನ್ನು ಹಿಮ್ಮಡಿಸಿತ್ತು! ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಲ್ನಡಿಗೆಯಲ್ಲೇ ಸಂಚರಿಸಿದ್ದರೂ ಆತನ ದೇ...