Posts

Showing posts from May, 2020

ಕೃಷ್ಣಾವತಾರ

Image
 ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ| ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| ಇದು ಭಗವದ್ಗೀತೆಯ ನಾಲ್ಕನೇ ಅಧ್ಯಾಯದ ಏಳು ಹಾಗೂ ಎಂಟನೇ ಶ್ಲೋಕದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಕೊಡುವ ಭರವಸೆ. ಇದರ ಅರ್ಥವೇನೆಂದರೆ - "ಹೇ ಭರತನೇ! ಯಾವಾಗ ಧರ್ಮದ ನಾಶ ಹಾಗೂ ಅಧರ್ಮವು ತಾಂಡವವಾಡುತ್ತವೋ ಅಲ್ಲಿ ನಾನು ಸಾಕಾರ ರೂಪದಿಂದ ಜಗತ್ತಿನ ಮುಂದೆ ಪ್ರಕಟನಾಗುತ್ತೇನೆ. ಸಾಧುಪುರುಷರನ್ನು ರಕ್ಷಿಸುವುದಕ್ಕಾಗಿ, ಅನ್ಯಾಯ ಮಾಡುವವರ ವಿನಾಶಕ್ಕಾಗಿ ಮತ್ತು ಧರ್ಮ ಸಂಸ್ಥಾಪನೆಗಾಗಿ ನಾನು ಯುಗ-ಯುಗಗಳಲ್ಲಿ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ! ಕೃಷ್ಣ! ಹೆಸರು ಕೇಳಿದರೆ ಸಾಕು ಹೃದಯದಲ್ಲಿ ಭಾವನಾ ತರಂಗಗಳು ಉದ್ಭವಿಸುತ್ತವೆ! ಮನಸ್ಸು ತಕ್ಷಣವೇ ಗೋಕುಲ, ವೃಂದಾವನ, ಮಥುರೆಯನ್ನು ವಿಹರಿಸುಕೊಂಡು ಬರುತ್ತದೆ! ಹೃದಯದಲ್ಲಿ ಯಾವುದೇ ಖಿನ್ನತೆಯಿದ್ದರೂ ಸರ್ವನಾಶವಾಗಿ ಪ್ರೇಮದ ಜ್ವಾಲೆ ಹೊತ್ತಿ ಉರಿಯುತ್ತದೆ! ಭಾವ ಉಕ್ಕಿ ಬರುತ್ತದೆ! ತನ್ನ ಜೀವವನ್ನೇ ಇತರರಿಗಾಗಿಯೇ ಸವೆಸಿದ ಆ ಪ್ರೇಮಮಯಿಯನ್ನು ನೆನೆಸಿಕೊಂಡಾಗ ಇಂತಹ ಅಪರೂಪದ ಅನುಭವಗಳಾದರೆ ಅಚ್ಚರಿಯೇನಲ್ಲ ಬಿಡಿ! ಕೃಷ್ಣ ಯಾರಿಗೆ ತಾನೇ ಇಷ್ಟವಿಲ್ಲ? ಪುಟ್ಟ ಮಕ್ಕಳಿಗೆ ಕೃಷ್ಣ 'ಬೆಣ್ಣೆ ಚೋರ'ನಾಗಿ ಕಂಡರೆ, ಯುವ ಪ್ರೇಮಿಗಳಿಗೆ ಈ ಗೋಪಾಲ 'Role Mode...