ಎಲ್ಲಿದ್ದಾನೆ ದೇವರು?
ಯಾರು ಈ ದೇವರು ? ದೇವರು ಇದ್ದಾನ ? ಹಾಗಾದರೆ ಎಲ್ಲಿದ್ದಾನೆ ? ಈ ಪ್ರಶ್ನೆ ಮನುಷ್ಯನಿಗೆ ತನ್ನ ಜೀವನದಲ್ಲಿ ಬರಲೇಬೇಕು . ಪ್ರಶ್ನೆನೇ ತುಂಬಾ ಚೆನ್ನಾಗಿದೆ . ಆದರೆ ಇದರ ಉತ್ತರ ಮಾತ್ರ ಅತ್ಯಂತ ಸರಳ ! ದೇವರು ಅನ್ನೋದು ಒಂದು 'ಶಕ್ತಿ ' . ಹೇಗೆ ಒಂದು ಯಂತ್ರವನ್ನು ಚಲಾಯಿಸಲು ಒಬ್ಬ ಮಾಲಿಕನ ಅವಶ್ಯಕತೆ ಇದೆಯೋ ಹಾಗೇ ಈ ಪ್ರಪಂಚ ಎಂಬ 'ಮಾಯೆ' ಯ ಸೂತ್ರಧಾರನು ಇರಲೇಬೇಕು ಅಲ್ವಾ ? ನಾನು ಪ್ರಪಂಚವನ್ನು 'ಮಾಯೆ ' ಎಂದು ಕರೆದೆ ; ಯಾಕೆ ಗೊತ್ತಾ ? ವಾಸ್ತವವಾಗಿ ಈ 'ಪ್ರಪಂಚ ' ಅನ್ನೋದು ಇಲ್ವೇ ಇಲ್ಲ ! ಬದಲಾಗಿ ಇದು ನಮ್ಮ ಭ್ರಮೆ . ನಾವಿಲ್ಲಿ ಪದಪ್ರಯೋಗವನ್ನು ತಪ್ಪಾಗಿ ಮಾಡುತ್ತಿದ್ದೇವೆ ಅಷ್ಟೇ . ಪ್ರಪಂಚದ ಬದಲಾಗಿ ನಾವು 'ದೇವರು' ಎಂದು ಹೇಳಬೇಕಿತ್ತು. ಎಲ್ಲೆಲ್ಲೂ ದೇವರೇ ಆವೃತನಾಗಿರುವಾಗ ಈ ಜಗತ್ತಿಗೆ ಜಾಗ ಎಲ್ಲಿ ಸಿಗಬೇಕು ? ಆದ್ದರಿಂದ ಜಗತ್ತು ಅನ್ನೋದು ಒಂದು ಮಾಯೆ ಅಷ್ಟೇ . ಈ ಪ್ರಶ್ನೆ ನರೇಂದ್ರನಿಗೂ ಕೂಡ ಬಾಲ್ಯದಲ್ಲಿಯೇ ಬಂದಿತ್ತು . "ನೀವು ದೇವರನ್ನು ನೋಡಿದ್ದೀರ ?" ಎಂದು ಅನೇಕರಿಗೆ ಕೇಳಿದನು . ಆದರೆ ಯಾರಿಂದಲೂ ಸೂಕ್ತ ಉತ್ತರ ಸಿಗಲಿಲ್ಲ . ಕೊನೆಗೆ ನರೇಂದ್ರನಿಗೆ ಅನಿಸಿತು "ಈ ಎಲ್ಲಾ ಜನರದ್ದು ಕೇವಲ ಬುಟಾಟಿಕೆ ಅಷ್ಟೇ ! ಪ್ರತಿಯೊಬ್ಬರೂ ದೇವರ ಪೂಜೆ ಮಾಡುತ್ತಾರೆ ಆದರೆ ಒಬ್ಬರೂ ಕೂಡ ದೇವರನ್ನು ನೋಡಿಲ್ಲ! ಏನಿದು ವಿಚಿತ್ರ ! " ಕೊನೆಗೆ ನರೇಂದ್...